ಬೆಂಗಳೂರು : ನವೆಂಬರ್ 24: ದ್ರಶ್ಯ ನ್ಯೂಸ್ :ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ನಿರ್ಭಯ ನಿಧಿ ಅಡಿ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡವನ್ನು ಉದ್ಘಾಟಿಸಿದರು.
ಈ ಯೋಜನೆಗೆ 661.5 ಕೋಟಿ ರೂ. ಖರ್ಚಾಗಿದೆ. ಕೇಂದ್ರ ಸರ್ಕಾರದ ಶೇ.60 ಹಾಗೂ ರಾಜ್ಯಸರ್ಕಾರದ ಶೇ. 40 ರಷ್ಟು ಅನುದಾನ ನೀಡಲಾಗಿದೆ ಎಂದರು.
ಬೆಂಗಳೂರು ನಗರದ ಜನರಿಗೆ ಸುರಕ್ಷತೆಯನ್ನು ಈ ಕೇಂದ್ರ ಒದಗಿಸಲಿದೆ. ಮಹಿಳೆಯರು, ಅಂಗವಿಕಲರು, ವಯೋವೃದ್ಧರಿಗೆ ಯಾವುದೇ ತೊಂದರೆ ಸಂಭವಿಸಿದರೂ ಈ ಕೇಂದ್ರ ಅವರಿಗೆ ತ್ವರಿತ ಸಹಾಯ ಒದಗಿಸಲಿದೆ. ಈ ಕೇಂದ್ರದ ಸಹಕಾರದಿಂದ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪೊಲೀಸರು 7 ನಿಮಿಷದೊಳಗೆ ಆಗಮಿಸಿ, ತೊಂದರೆಯಲ್ಲಿರುವ ಜನರಿಗೆ ನೆರವು ನೀಡಲಿದೆ ಎಂದು ತಿಳಿಸಿದರು.
ಬೆಂಗಳೂರು ಸೇರಿದಂತೆ ದೇಶದ 8 ಕಡೆಗಳಲ್ಲಿ ಇಂತಹ ಕೇಂದ್ರವನ್ನು ತೆರೆಯಲಾಗಿದೆ. ದೇಶದ 8 ಸ್ಥಳಗಳಲ್ಲಿ ಈ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದರೂ, ಬೆಂಗಳೂರಿನಲ್ಲಿ ಮಾತ್ರ ಸೇಫ್ ಸಿಟಿ ಕಮಾಂಡ್ ಕೇಂದ್ರ ಕಟ್ಟಡವನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಕಟ್ಟಡಕ್ಕೆ ಸುಮಾರು 12 ಕೋಟಿ ರೂ. ವೆಚ್ಚವಾಗಿದೆ ಎಂದರು.