ಉಡುಪಿ : ನವೆಂಬರ್ 24: ದ್ರಶ್ಯ ನ್ಯೂಸ್ :ಉಡುಪಿ ಯಲ್ಲಿ ದ್ವಾದಶಿ ತುಳಸಿ ಪೂಜಾ ಸಂಭ್ರಮಾಚರಣೆ ನಡುವೆ ಇಂದು ಬಿಸಿಲು-ಮೋಡ ವಾತಾವರಣದ ನಡುವೆ ಹಲವೆಡೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ.
ಮುಂಜಾನೆಯಿಂದ ಮೋಡ ಕವಿದ ವಾತಾವರಣ ಇತ್ತು.ಮದ್ಯಾಹ್ನದ ವೇಳೆ ಉತ್ತಮ ಮಳೆ ಸುರಿದಿದೆ.
ಹಲವಡೆ ಗುಡುಗು, ಸಿಡಿಲು, ಮಿಂಚಿನೊಂದಿಗೆ ಗಾಳಿ ಮಳೆಯಾಗಿದ್ದು, ವಾತಾವರಣದ ಅನಿರೀಕ್ಷಿತ ಬದಲಾವಣೆ ಬಿಸಿಲ ದಗೆಯಿಂದ ಬೇಸತ್ತ ಜನರಿಗೆ ತಂಪೆರಚಿದಂತಾಗಿದೆ .
ಇನ್ನೂ ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಹ ಇಂದಿನಿಂದ ಮೂರು ದಿನ ಮಳೆ ಅಬ್ಬರಿಸಲಿದೆ. ಮೂರು ದಿನಗಳ ನಂತರವು ಈ ಮಳೆ ತುಸು ದುರ್ಬಲಗೊಂಡರು ಸಹಿತ ಮತ್ತೆ ಡಿಸೆಂಬರ್ 1ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.