ಬೆಂಗಳೂರು : ನವೆಂಬರ್ 23: ದ್ರಶ್ಯ ನ್ಯೂಸ್ : ರಾಜ್ಯದ ಜನರು ನವೋದ್ಯಮವನ್ನು ಆರಂಭಿಸೋದಕ್ಕೆ ಆರ್ಥಿಕ ನೆರವು ನೀಡುವಂತ ಯೋಜನೆಗಳಲ್ಲಿ ಒಂದು ಎಲಿವೇಟ್ ಯೋಜನೆಯಾಗಿದೆ. ಈ ಯೋಜನೆಯಡಿ ಆರ್ಥಿಕ ಸಹಾಯ ಪಡೆಯಲು ಇಂದಿನಿಂದ ಅರ್ಜಿ ಆರಂಭಗೊಳ್ಳಲಿದೆ.
ಈ ಕುರಿತಂತೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದು, ನವೋದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ನೀಡುವಂತ ಎಲಿವೇಟ್ ಯೋಜನೆಗೆ ಇಂದಿನಿಂದ ನೋಂದಣಿ ಆರಂಭವಾಗಲಿದೆ ಅಂತ ತಿಳಿಸಿದ್ದಾರೆ.
ಇಂದಿನಿಂದ ಆರಂಭಗೊಂಡಂತ ನೋಂದಣಿಯು 1 ತಿಂಗಳು ಪೂರ್ತಿ ಅವಕಾಶವನ್ನು ನೋಂದಣಿಗೆ ನೀಡಲಾಗುತ್ತಿದೆ. 100 ನವೋದ್ಯಮಗಳನ್ನು ಆಯ್ಕೆ ಮಾಡಲಿದೆ. ಹೀಗೆ ಆಯ್ಕೆಯಾದಂತ ನವೋದ್ಯಮಗಳಿಗೆ 50 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.ನ. 23ರಿಂದ ಡಿ. 23ರ ಒಳಗೆ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೂಲಕ ‘ಎಲಿವೇಟ್ 2023– ಕರೆ 2 ಮತ್ತು ಎಲಿವೇಟ್ ಉನ್ನತಿ– 2023’ ಯೋಜನೆಗೆ ಅರ್ಜಿ ಸಲ್ಲಿಸಬಹುದು’ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ .