ಮಂಗಳೂರು:ನವೆಂಬರ್ 23: ದ್ರಶ್ಯ ನ್ಯೂಸ್ :ಕಂಕನಾಡಿಯ ಲಾಡ್ಜ್‌ಗೆ ಬೆಂಕಿ ತಗುಲಿ ಓರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಕಂಕನಾಡಿ ಬೆಂದೂರ್ ವೆಲ್‌ನ ವಸತಿಗೃಹದಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಬೆಂಕಿ ದುರಂತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
‘ನಗರದ ಬಿಕರ್ನಕಟ್ಟೆಯ ಯಶರಾಜ್ ಸುವರ್ಣ (43) ಮೃತರು ಎಂದು ಗುರುತಿಸಲಾಗಿದೆ ಅವರು ತಾಯಿ ಮತ್ತು ಪತ್ನಿಯನ್ನು ಅಗಲಿದ್ದಾರೆ
ಅವರು ನ. 15ರಿಂದ ಈ ಕೊಠಡಿಯನ್ನು ಬಾಡಿಗೆಗೆ ಪಡೆದು ಅಲ್ಲೇ ಉಳಿದುಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ’ ಎಂಬುದಾಗಿ ಅಗ್ನಿಶಾಮಕ ದಳದ ಮೂಲಗಳು ತಿಳಿಸಿವೆ.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ತನಿಖೆ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ .