ಉಡುಪಿ : ನವೆಂಬರ್ 22:ದೃಶ್ಯ ನ್ಯೂಸ್ದ: ದ .ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ನಿ. ಮಂಗಳೂರು ಇವರ ನೇತೃತ್ವದಲ್ಲಿ, ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕೆ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇವರ ಸಹಭಾಗೀತ್ವದಲ್ಲಿ ರಚನೆಗೊಂಡ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯು ಆಯೋಜಿಸುತ್ತಿರುವ, ದಿನಾಂಕ 02/12/2023 ಮತ್ತು 03/12/2023 ರಂದು ನಡೆಯಲಿರುವ “ಮತ್ಸ್ಯ ಮೇಳ” – 2023 ರ ಪೋಸ್ಟರ್ ನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಬಿಡುಗಡೆಗೊಳಿಸಿದರು.
ತದನಂತರ ಮಾತನಾಡಿದ ಇರ್ವರೂ “ಮತ್ಸ್ಯ ಮೇಳ” – 2023 ಅತ್ಯಂತ ಯಶಸ್ವಿಯಾಗಿ ನಡೆಯಲಿ ಉಡುಪಿಯ ಹಾಗೂ ಸುತ್ತಮುತ್ತಲಿನ ಊರಿನ ಜನತೆಗೆ ಸಾಗರೋತ್ಪನ್ನಗಳ ರಸದೌತಣ ಉಣಬಡಿಸಲು ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿ ಹಮ್ಮಿಕೊಂಡಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರಲ್ಲದೇ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಸಹಾಯ ಸಹಕಾರ ನೀಡುವುದಾಗಿ ನುಡಿದರು.
ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರ ಉತ್ಪಾದಕರ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ನಿರ್ದೇಶಕರುಗಳಾದ ಜಯಂತಿ ಸಾಲಿಯಾನ್, ನಿರ್ಮಲ ಸಾಲಿಯಾನ್, ವೇದಾವತಿ ಪುತ್ರನ್ ಮತ್ತು ರೇಣುಕಾ ಹಾಗೂ ಮುಖ್ಯ ಕಾರ್ಯನಿರ್ವಾಹಕ ವಿಷ್ಣುಪ್ರಸಾದ್ ಕಾಮತ್ ಉಪಸ್ಥಿತರಿದ್ದರು.