ಉಡುಪಿ : ನವೆಂಬರ್ 22: ದ್ರಶ್ಯ ನ್ಯೂಸ್ : ಉಡುಪಿ ಕಡೆಯ ಸರ್ವೀಸ್ ರಸ್ತೆಯಲ್ಲಿ ಬಂದ ಪಲ್ಸರ್ ಬೈಕ್ ನ. 20ರ ತಡರಾತ್ರಿಯ ವೇಳೆ ಹಠಾತ್ ಬಲಕ್ಕೆ ತಿರುಗಿಸಿದಾಗ ಹೆಜಮಾಡಿಗೆ ಹೋಗುತ್ತಿದ್ದ ಸ್ಕೂಟಿಗೆ ಢಿಕ್ಕಿಯಾಗಿ ಸ್ಕೂಟಿ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಸ್ಕೂಟಿ ಸವಾರ ಕಾಪು ಮಜೂರಿನ ಸೆಯ್ಯದ್ ಅಮೀನ್ ಹಾಗೂ ಸಹ ಸವಾರ ಪವಾಜ್ ಶೇಖ್ ಮಲ್ಲಾರು ಗಾಯಗೊಂಡವರು.
ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೈಕ್ ಸವಾರ ಕಾಪುವಿನ ನೌಜಲ್ ಅಹಮ್ಮದ್‌ಗೂ ಗಾಯವಾಗಿದ್ದು ಪಡುಬಿದ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.