ಬೆಂಗಳೂರು:ನವೆಂಬರ್ 09:ಬಣ್ಣ ಬೆರೆಸುವ ಪೇಯಿಂಟಿಂಗ್ ಮಿಕ್ಸರ್ ಯಂತ್ರಕ್ಕೆ ಕೂದಲು ಸಿಲುಕಿ ಮಹಿಳೆಯೊಬ್ಬರು ಧಾರುಣ ಸಾವಿಗೀಡಾದ ಘಟನೆ ನೆಲಗದರನಹಳ್ಳಿಯ ಕಾರ್ಖಾನೆಯೊಂದರಲ್ಲಿ ನಡೆದಿದೆ
34 ವರ್ಷದ ಶ್ವೇತಾ ಎಂಬ ಮಹಿಳೆ ಸಾವನ್ನಪ್ಪಿದ್ದವರು.ಈಕೆಗೆ ಮದುವೆಯಾಗಿ ಓರ್ವ ಮಗನಿದ್ದಾನೆ. ಯಂತ್ರದ ಸ್ವಿಚ್ ಆಫ್ ಮಾಡದೇ ಬಣ್ಣ ಪರಿಶೀಲಿಸಲು ಬಗ್ಗಿದಾಗ ಜಡೆ ಯಂತ್ರಕ್ಕೆ ಸಿಲುಕಿ ಅವಘಡವಾಗಿದೆ.
ಮಿಕ್ಸರ್ ಶಬ್ಧದಿಂದಾಗಿ ಮಹಿಳೆ ಕೂಗಿಕೊಂಡರೂ ಯಾರಿಗೂ ಕೇಳಿಸಿರಲಿಲ್ಲ. ಉಳಿದ ಕೆಲಸಗಾರರು ಸ್ಥಳಕ್ಕೆ ಬಂದಾಗ ಶ್ವೇತಾ ದೇಹ ಮತ್ತು ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.