ಉಡುಪಿ : ನವೆಂಬರ್ 08:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮ ನವೆಂಬರ್ 18 ರಂದು ಉಡುಪಿಯ ಅಂಬಾಗಿಲು ಅಮೃತ್ ಗಾರ್ಡ್‌ನ್‌ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಜನಪದ ನೃತ್ಯ ಮತ್ತು ಜನಪದ ಹಾಡು (ಗುಂಪು ಸ್ಪರ್ಧೆ ಹಾಗೂ ವೈಯಕ್ತಿಕ ವಿಭಾಗ), ಕಥೆ ಬರೆಯುವುದು, ಭಿತ್ತಿ ಪತ್ರ ತಯಾರಿಕೆ, ಘೋಷಣೆ ಹಾಗೂ ಛಾಯಾಚಿತ್ರಣ ಸ್ಪರ್ಧೆಗಳು ನಡೆಯಲಿದ್ದು, ಜಿಲ್ಲೆಯ 15-29 ವರ್ಷದೊಳಗಿನ ಯುವಕ, ಯುವತಿಯರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.
ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಸತತವಾಗಿ ಮೂರು ವರ್ಷ ಭಾಗವಹಿಸಿದ ಅಥವಾ ಒಂದು ಬಾರಿ ಪದಕ ವಿಜೇತ ಸ್ಪರ್ಧಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಜಿಲ್ಲಾ ಮಟ್ಟದ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದು, ಸ್ಪರ್ಧಾಳುಗಳು ತಮ್ಮ ತಂಡದ ಹೆಸರನ್ನು ನವೆಂಬರ್ 16ರೊಳಗೆ -youthserviceudupi@gmail.com- ನಲ್ಲಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ:0820-2521324 ಅನ್ನು ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.