ಉಡುಪಿ : ನವೆಂಬರ್ 07: ದ್ರಶ್ಯ ನ್ಯೂಸ್ :ಉಡುಪಿ ಜಿಲ್ಲಾದ್ಯಂತ ಅಕ್ಷರದಾಸೋಹ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಮತ್ತು ನಾಳೆ ಬಿಸಿಯೂಟ ಬಂದ್‌ಗೆ ಕರೆ ನೀಡಿದ್ದಾರೆ.
ಇದರಿಂದ ಕೆಲವು ಶಾಲೆಗಳಲ್ಲಿ ಮಕ್ಕಳು ಬಿಸಿಯೂಟ ವಂಚಿತರಾಗುವ ಸಾಧ್ಯತೆಗಳಿದ್ದು, ಅಕ್ಷರದಾಸೋಹ ನೌಕರರು ಮುಷ್ಕರ ನಡೆಸಿದರೂ ಮಕ್ಕಳಿಗೆ ಬಿಸಿಯೂಟ ಒದಗಿಸಲು ಯಾವುದೇ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು,ಶಿಕ್ಷಕರು ಹಾಗೂ ಎಸ್‌ಡಿಎಂಸಿ ನೆರವಿನೊಂದಿಗೆ ಅಡುಗೆ ಮಾಡುವಂತೆ ಈಗಾಗಲೇ ಎಲ್ಲರಿಗೂ ಸೂಚನೆ ನೀಡಲಾಗಿದೆ ಎಂದು ಡಿಡಿಪಿಐ ಬಿ.ಗಣಪತಿ ಅವರು ತಿಳಿಸಿರುತ್ತಾರೆ
ವೇತನ ಹೆಚ್ಚಳ ಸಹಿತ ವಿವಿಧ ಸೌಲಭ್ಯಗಳನ್ನು ಸರಕಾರ ಒದಗಿಸಬೇಕೆಂದು ಆಗ್ರಹಿಸಿ ಅಕ್ಷರ ದಾಸೋಹ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ.