ಉಡುಪಿ ನ.4:ದ್ರಶ್ಯ ನ್ಯೂಸ್ :ಕಳೆದ ಹತ್ತು ದಿನಗಳ ಹಿಂದೆ ಮಲ್ಪೆ ಠಾಣಾ ವ್ಯಾಪ್ತಿಯ ಹೂಡೆಯಲ್ಲಿ ರಾತ್ರಿ ಹೊತ್ತು ಅಸಹಾಯಕಳಾಗಿ ಅತಂತ್ರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ವಿಶು ಶೆಟ್ಟಿ ರಕ್ಷಿಸಿ ಚಿಕಿತ್ಸೆ ಕೊಡಿಸಿ ಸಖಿ ಸೆಂಟರಿಗೆ ದಾಖಲಿಸಿದ್ದು, ಇದೀಗ ಪತಿಗೆ ಹಸ್ತಾಂತರಿಸುವಲ್ಲಿ ವಿಶು ಶೆಟ್ಟಿ ಯಶಸ್ವಿಯಾಗಿದ್ದಾರೆ.
ಮಹಿಳೆ ಮುಜುರಾಣಿ (50 ವರ್ಷ) ಮೂಲತಃ ಹರಿಯಾಣದವಳಾಗಿದ್ದು, ಮಹಿಳೆ ನೀಡಿದ ಮಾಹಿತಿ ಮೇರೆಗೆ ಸಖಿ ಸಿಬ್ಬಂದಿಗಳು ಹಾಗೂ ಮಲ್ಪೆ ಠಾಣಾಧಿಕಾರಿ ಸುಷ್ಮಾ ಭಂಡಾರಿ ಕುಟುಂಬದವರನ್ನು ಸಂಪರ್ಕಿಸಿದ್ದರು. ಮೊದಲು ಸರಿಯಾದ ಸ್ಪಂದನೆ ನೀಡದಿದ್ದರೂ, ಅವರ ಮನವೊಲಿಸಿ ಮಹಿಳೆಯ ಪತಿಯನ್ನು ಹರಿಯಾಣದಿಂದ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಮಹಿಳೆಯ ಪತಿ ಉಡುಪಿಗೆ ಬಂದಿದ್ದು ಸಖಿ ಸೆಂಟರ್ ನವರ ಕಾನೂನು ಪ್ರಕ್ರಿಯೆ ಮುಗಿಸಿ ಪತ್ನಿಯನ್ನು ವಶಕ್ಕೆ ಪಡೆದು ಹರಿಯಾಣದ ರೈಲು ಹತ್ತಿದ್ದಾರೆ.
ರೈಲ್ವೆ ನಿಲ್ದಾಣಕ್ಕೆ ದಂಪತಿಗಳನ್ನು ವಿಶು ಶೆಟ್ಟಿ ತನ್ನ ವಾಹನದಲ್ಲಿ ತಲುಪಿಸಿದ್ದು ಪತಿ ಸಖಿ ಸೆಂಟರ್ ಹಾಗೂ ವಿಶು ಶೆಟ್ಟಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.