ನವದೆಹಲಿ :ನವೆಂಬರ್ 04:ಕರ್ನಾಟಕದ ಬಹುನಿರೀಕ್ಷಿತ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಚರ್ಚೆಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹೆಚ್ಚುವರಿ ರಾಜ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದ್ದಾರೆ.
ಕೆಡಬ್ಲ್ಯುಎಂಎ ಸಭೆ ಬಳಿಕ ಸುದ್ದಿಗಾರರ ಜತೆಗೆ ಶುಕ್ರವಾರ ದೆಹಲಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಕುರಿತು ಚರ್ಚಿಸಲು ಶೀಘ್ರ ದಿನಾಂಕ ನಿಗದಿ ಮಾಡಲಾಗುವುದು ಎಂದು ಪ್ರಾಧಿಕಾರ ಹೇಳಿದೆ.
ಅದೇ ರೀತಿ ತಮಿಳುನಾಡು ಕೂಡ ನದಿ ಜೋಡಣೆ ಕುರಿತು ಚರ್ಚೆ ಮಾಡಲು ಮುಂದಾಗಿದೆ. ಇದಕ್ಕೆ ಕರ್ನಾಟಕದಿಂದ ಆಕ್ಷೇಪಣೆ ಸಲ್ಲಿಸಲಾಗಿದೆ. ಪ್ರತ್ಯೇಕ ಸಭೆಯಲ್ಲಿ ಮೇಕೆದಾಟು ಹಾಗೂ ನದಿ ಜೋಡಣೆ ಕುರಿತು ಚರ್ಚೆ ನಡೆಯಬಹುದು ಎಂದು ತಿಳಿಸಿದ್ದಾರೆ.
ನೀರನ್ನು ನ.23ರವರೆಗೆ ಬಿಡುಗಡೆಗೆ ಕಾವೇರಿ ನೀರು ನಿಯಂತ್ರಣಸಮಿತಿ ಮಾಡಿದ್ದ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿಹಿಡಿದಿದೆ. ದೆಹಲಿಯಲ್ಲಿ ನಡೆದ ಕೆಡಬ್ಲ್ಯು ಎಂಎ ಸಭೆಯಲ್ಲಿ ಕರ್ನಾ ಟಕದ ಆಕ್ಷೇಪದ ಹೊರತಾಗಿಯೂ ಈ ನಿರ್ಧಾರ ಮಾಡಲಾಗಿದೆ. ಈ ವೇಳೆ ತಮಿಳುನಾಡಿನ ಅಧಿಕಾರಿಗಳು ನಿತ್ಯ 13 ಸಾವಿರ ಕ್ಯುಸೆಕ್ ನೀರು ಬಿಡುವಂತೆ ಆದೇಶಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು