ಉಡುಪಿ :ನವೆಂಬರ್ 03:ದ್ರಶ್ಯ ನ್ಯೂಸ್ :ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ಬಕೆಟ್ ಬ್ಯಾಗ್ ಹಿಡಿದುಕೊಂಡು ನನಗೆ ಮೋಸವಾಗಿದೆ ಎಂದು ಮರುಗುತ್ತಿದ್ದವರನ್ನು ವಿಶು ಶೆಟ್ಟಿ ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.
ಮಹಿಳೆ ಗುಲಾಬಿ ಬಂಗೇರ ಸ್ಥಳೀಯ ಮಹಿಳೆ ಎಂದು ಮಾಹಿತಿ ನೀಡಿದ್ದು ನನ್ನ ಆಸ್ತಿ ನನಗೆ ಮೋಸ ಆಗಿದೆ. ನಾನು ಬೇರೆಯವರ ಮನೆಯಲ್ಲಿದ್ದು ಇದೀಗ ಬೀದಿಗೆ ಬಿದ್ದಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಮೇಲ್ನೋಟಕ್ಕೆ ಮಹಿಳೆ ಯಾವುದೊ ವಿಷಯದಲ್ಲಿ ಮನನೊಂದು ಮಾನಸಿಕ ವ್ಯಾದಿಗೆ ತುತ್ತಾಗಿರಬಹುದು ಎಂದು ತೋರುತ್ತದೆ. ಈ ಬಗ್ಗೆ ಮಲ್ಪೆ ಠಾಣೆಗೆ ಮಾಹಿತಿ ನೀಡಲಾಗಿದ್ದು ಸಂಬಂಧಪಟ್ಟವರು ಸಖಿ ಸೆಂಟರ್ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.