ಬೆಂಗಳೂರು : ನವೆಂಬರ್ 02: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷಕ್ಕೆ 3 ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧರಿಸಿದ್ದು, ಈ ಮೂಲಕ ಹೊಸ ಪ್ರಯತ್ನಕ್ಕೆ ಇಲಾಖೆ ಮುಂದಾಗಿದೆ.
ಈ ನಡುವೆ ಮೊದಲ ವಾರ್ಷಿಕ ಪರೀಕ್ಷೆಯನ್ನು ಹೊಸ ವಿದ್ಯಾರ್ಥಿಗಳು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆದರೆ ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳು ಮಾತ್ರ ಈ 3 ಪರೀಕ್ಷೆಗಳನ್ನು ತಮ್ಮ ಇಚ್ಛಾನುಸಾರ ತೆಗೆದುಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅವಕಾಶ ನೀಡಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಎರಡಕ್ಕೂ ಈಗ ಸಂಭವನೀಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಈ ರೀತಿಇದೆ
ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ( ಮೇ 8 ಕ್ಕೆ ಫಲಿತಾಂಶ, ಮೇ 23 ಮೌಲ್ಯಮಾಪನ ಫಲಿತಾಂಶ ಪ್ರಕಟ) ಪರೀಕ್ಷೆ-2: ಜೂನ್ 12 ರಿಂದ ಜೂನ್ 19 (ಜೂನ್ 29ಕ್ಕೆ ಫಲಿತಾಂಶ ಪ್ರಕಟ, ಜುಲೈ 10 ರಂದು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟ) ಪರೀಕ್ಷೆ- ಜೂನ್ 29ರಿಂದ ಆಗಸ್ಟ್ 5 (ಆಗಸ್ಟ್ 19ಕ್ಕೆ ಫಲಿತಾಂಶ. ಆಗಸ್ಟ್ 26 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ) ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪರೀಕ್ಷೆ-1: ಮಾರ್ಚ್ 1ರಿಂದ ಮಾರ್ಚ್ 25 (ಏಪ್ರಿಲ್ 22 ಫಲಿತಾಂಶ ಪ್ರಕಟ, ಮೇ 10 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ) ಪರೀಕ್ಷೆ-2: ಮೇ 15 ರಿಂದ ಜೂನ್ 5 (ಜೂನ್ 21ರಂದು ಫಲಿತಾಂಶ ಪರೀಕ್ಷೆ-3: ಜುಲೈ 12ರಿಂದ ಜುಲೈ 30 (ಆಗಸ್ಟ್ 16ಕ್ಕೆ ಫಲಿತಾಂಶ ಪ್ರಕಟ, ಜೂನ್ 29 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ) ಪ್ರಕಟ, ಆಗಸ್ಟ್ 25 ಮರುಮೌಲ್ಯಮಾಪನ ಫಲಿತಾಂಶ ಪ್ರಕಟ