ಬೆಂಗಳೂರು :ನವೆಂಬರ್ 02: ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಕರಾಳ ದಿನ ಆಚರಣೆಯ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು.
ಈ ಕಲ್ಲು ತೂರಾಟದ ನಡುವೆಯೂ ಮಹಾರಾಷ್ಟ್ರದ ವಿವಿಧ ಸ್ಥಳಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ ಸಂಚಾರವನ್ನು ಇಂದು ಪುನರಾರಂಭಿಸಲಾಗಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯುತ್ತಿರುವ ಮರಾಠ ಮೀಸಲಾತಿ ಚಳುವಳಿ ಹೋರಾಟ ಸಂಬಂಧ ಬೆಂಗಳೂರಿನಿಂದ ಹೊರಡುವ ಶಿರಡಿ, ಮುಂಬೈ, ಪುಣೆ ಅನುಸೂಚಿಗಳನ್ನು ಪುನರಾಂಭಿಸಲಾಗಿದೆ. ಎಂದಿನಂತೆ ಬಸ್ಸುಗಳ ಕಾರ್ಯಾಚರಣೆ ಇರಲಿದೆ ಎಂದು ಹೇಳಿದೆ
ನಿನ್ನೆಯ ನವೆಂಬರ್.1ರ ಕನ್ನಡ ರಾಜ್ಯೋತ್ಸವದಂದೇ ಮಹಾರಾಷ್ಟ್ರದಲ್ಲಿ ಎಂಇಎಸ್ ಪುಂಡರು ಪುಂಡಾಟಿಕೆ ಮೆರೆದು ಕರ್ನಾಟಕ ಸಾರಿಗೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಘಟನೆಯಿಂದ ಕೆ ಎಸ್ ಆರ್ ಟಿಸಿ, ಕೆಕೆಆರ್ ಟಿಸಿ ಬಸ್ಸುಗಳ ಗಾಜುಗಳು ಪುಡಿ ಪುಡಿಯಾಗಿದ್ದವು. ಮುಂಜಾಗ್ರತಾ ಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾರಿಗೆ ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಪರಿಸ್ಥಿತಿ ತಿಳಿಗೊಂಡ ನಂತ್ರ, ಸಂಚಾರವನ್ನು ಇಂದಿನಿಂದ ಮತ್ತೆ ಪುನರಾರಂಭಿಸಲಾಗಿದೆ.