ಮೈಸೂರು:ನವೆಂಬರ್ 02:ದ್ರಶ್ಯ ನ್ಯೂಸ್: ಮೈಸೂರು ರಾಜ್ಯ ಕರ್ನಾಟಕವಾಗಿ ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಕರ್ನಾಟಕ ಸಂಭ್ರಮ-50ರ ಹೆಸರಿನಲ್ಲಿ ವರ್ಷಪೂರ್ತಿ ಕನ್ನಡ ರಾಜ್ಯೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನಲೆಯಲ್ಲಿ ಇಂದು ಸಿಎಂ ಸಿದ್ಧರಾಮಯ್ಯ ಅವರು ವಿಶ್ವವಿಖ್ಯಾತ ಹಂಪಿಯಲ್ಲಿ ಕರುನಾಡಿನ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕನ್ನಡ ಜ್ಯೋತಿ ರಥಯಾತ್ರೆಗೆ ಹಂಪಿಯಲ್ಲಿ ಚಾಲನೆ ನೀಡಲಿದ್ದು, ಇದು ರಾಜ್ಯಾಧ್ಯಂತ ವರ್ಷವಿಡೀ ಸುತ್ತಾಡಲಿದೆ. ಕನ್ನಡ ರಥ ಅಕ್ಟೋಬರ್.31, 2024ರಂದು ಬೆಂಗಳೂರಿಗೆ ಆಗಮಿಸಿ, ಕನ್ನಡ ರಥಯಾತ್ರೆ ಮುಕ್ತಾಯಗೊಳ್ಳಲಿದೆ.
ಇಂದು ಹಂಪಿಯಲ್ಲಿ ಮೆರವಣಿಗೆ, ಹೆಲಿಕ್ಯಾಪ್ಟರ್ ನಲ್ಲಿ ಪುಷ್ಪವೃಷ್ಟಿಯ ಬಳಿಕ ಯಾತ್ರೆ ಶುರುವಾಗಲಿದೆ. ಹಂಪಿಯಿಂದ ಕೊಪ್ಪಳ ಮಾರ್ಗವಾಗಿ ನಾಳೆ ಗದಗಕ್ಕೆ ಯಾತ್ರೆ ತೆರಳಲಿದೆ. ಬಳಿಕ ಕರುನಾಡಿನಾಧ್ಯಂತ ಸಂಚಾರ ಮಾಡಲಿದೆ.