ಉಡುಪಿ : ಅಕ್ಟೋಬರ್ 31:ದ್ರಶ್ಯ ನ್ಯೂಸ್ : ಉದ್ಯಾವರ ಅಂಕುದ್ರುವಿನಲ್ಲಿ ಚಲಿಸುತ್ತಿದ್ದ ಬೈಕ್‌ನಿಂದ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಅಂಕುದ್ರು ಉಪ್ಪುಗುಡ್ಡೆ ನಿವಾಸಿ ನಿರ್ಮಲಾ (61) ಅವರು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ಗುರುವಾರ ಉದ್ಯಾವರದ ಬಿಲ್ಲವ ಮಹಾಜನ ಸಂಘದಲ್ಲಿ ನಡೆದಿದ್ದ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ದೂರದ ಸಂಬಂಧಿ ದಿನೇಶ್ ಅವರ ಬೈಕ್‌ನಲ್ಲಿ ಕುಳಿತು ಮನೆಯ ಕಡೆಗೆ ಪ್ರಯಾಣಿಸುತ್ತಿದ್ದಾಗ ಅವರುಬೈಕ್‌ನಿಂದ ರಸ್ತೆಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.ಅವರನ್ನು ಮಗ ನಿಖಿಲ್, ಬೈಕ್ ಸವಾರ ದಿನೇಶ್ ಮತ್ತು ಶಕುಂತಲಾ ಅವರು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಬಳಿಕ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಅಲ್ಲಿನ ವೈದ್ಯರು ನಿರ್ಮಲಾ ಅವರ ಬ್ರೈನ್ ಡೆಡ್ ಆಗಿರುವುದಾಗಿ ತಿಳಿಸಿದ್ದು, ಬಳಿಕ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಲಾಗಿತ್ತು. ಮೃತರು ಪತಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.