ಉಡುಪಿ : ಅಕ್ಟೋಬರ್ 31: ದ್ರಶ್ಯ ನ್ಯೂಸ್ :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಉಡುಪಿಯ ಸೈಂಟ್ ಸಿಸಿಲೀಸ್ ಪ್ರೌಢಶಾಲೆಗಳ ಸಂಯುಕ್ತ ಆಶ್ರಯದಲ್ಲಿ
14 ವರ್ಷದೊಳಗಿನ ಶಾಲಾ ಬಾಲಕ- ಬಾಲಕಿಯರ ಮೂರು ದಿನಗಳ ರಾಜ್ಯಮಟ್ಟದ ಕ್ರೀಡಾಕೂಟ 2023-24, ನವೆಂಬರ್ 1ರಿಂದ 3ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣ ದಲ್ಲಿ ಹಮ್ಮಿಕೊಳ್ಳಲಾಗಿದೆ
ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ರಾಜ್ಯದ 35 ಶೈಕ್ಷಣಿಕ ಜಿಲ್ಲೆಗಳು ಹಾಗೂ 2 ಕ್ರೀಡಾವಸತಿ ಶಾಲೆ ಗಳಿಂದ ಸುಮಾರು 1,800 ಮಂದಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ 250 ಮಂದಿ ತಂಡಗಳ ವ್ಯವಸ್ಥಾಪಕರು, 250 ಮಂದಿ ಕ್ರೀಡಾಧಿಕಾರಿಗಳು, ಸ್ವಯಂ ಸೇವಕರು, ಕ್ರೀಡಾ ಆಯೋಜಕರು ಸೇರಿದಂತೆ ಸುಮಾರು 2,500 ಮಂದಿ ಪಾಲ್ಗೊಳ್ಳಲಿದ್ದಾರೆ
ಕ್ರೀಡಾಕೂಟದ ಉದ್ಘಾಟನೆಗೆ ಮುನ್ನ ಅಪರಾಹ್ನ 3:00ಗಂಟೆಗೆ ಉಡುಪಿಯ ಶೋಕಮಾತಾ ಇಗರ್ಜಿ ಆವರಣದಿಂದ ಕ್ರೀಡಾಪಟು ವಿದ್ಯಾರ್ಥಿಗಳ ಮೆರವಣಿಗೆ ನಡೆಯಲಿದೆ. ಇದು ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡಿನ ಕ್ರೀಡಾಂಗಣಕ್ಕೆ ಬರಲಿದೆ.
ಪತ್ರಿಕಾಗೋಷ್ಠಿಯಲ್ಲಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ,ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಕೆ., ಸೈಂಟ್ ಸಿಸಿಲೀಸ್ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಪ್ರೀತಿ ಜೆ.ಕ್ರಾಸ್ತಾ ಸೈಂಟ್ ಸಿಸಿಲೀಸ್ ಸಮೂಹ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಸಿಸ್ಟ ತೆರೇಸಾ ಜ್ಯೋತಿ, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಸೊಹೇಲ್ ಅಮೀನ್, ಪ್ರಶಾಂತ್ ಜತ್ತನ್ನ, ಪ್ರಹ್ಲಾದ್ ಬಲ್ಲಾಳ್ ಮುಂತಾದವರು ಉಪಸ್ಥಿತರಿದ್ದರು.