ಮಹಾರಾಷ್ಟ್ರ : ಅಕ್ಟೋಬರ್ 31: ದ್ರಶ್ಯ ನ್ಯೂಸ್ : ಮರಾಠ ಮೀಸಲಾತಿ ಹೋರಾಟದ ಕಿಚ್ಚು ಹೆಚ್ಚುತಿದ್ದು ಹೋರಾಟಗಾರರು ಎನ್ ಸಿ ಪಿ ಇಬ್ಬರು ಶಾಸಕರುಗಳ ನಿವಾಸಕ್ಕೆ ನಿನ್ನೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಶಾಸಕರಾದ ಪ್ರಕಾಶ ಸೋಲಂಕಿ ಹಾಗೂ ಸಂದೀಪ್ ಕ್ಷೀರ ಸಾಗರ್ ಮನೆಗೆ ಬೆಂಕಿ ಹಚ್ಚಿದ್ದಾರೆ, ಮಹಾರಾಷ್ಟ್ರದ ಬೀಡ ನಗರದಲ್ಲಿ ಯಾವುದೇ ಸಮಾರಂಭ ನಡೆಸಬಾರದೆಂದು 5 ಕಿಲೋ ಮೀಟರ್ ಸುತ್ತಳತೆಯಲ್ಲಿ ನಿರ್ಬಂಧಿಸಲಾಗಿದೆ.
Nಸುಮಾರು200ಕ್ಕೂ ಹೆಚ್ಚು ಮಂದಿಯಿದ್ದ ಪ್ರತಿಭಟನಾಕಾರರು, ಬೀದರ್‌ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಬಸ್ಸನ್ನು ತಡೆದು, ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ, ಸ್ಥಳೀಯ ಪೊಲೀಸರ ಸಹಕಾರದಿಂದ ನಲ್ಲಿದ್ದ 39 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದ್ದು, ಸುರಕ್ಷಿತವಾಗಿ ಅವರು ತಲುಪಬೇಕಾದ ಸ್ಥಳಕ್ಕೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಕೆಎ 38 ಎಫ್ 1201 ಸಂಖ್ಯೆಯ ಕೆಎಸ್‌ಆರ್ಟಿಸಿ ಬಸ್ನಲ್ಲಿ 42 ಜನರುಪ್ರಯಾಣಿಸುತ್ತಿದ್ದು, ಅವರೆಲ್ಲರೂ, ಸುರಕ್ಷಿತವಾಗಿದ್ದು ಬೀದರ್ ಜಿಲ್ಲೆ ಭಾಲ್ಕಿಯಿಂದ ಮಹಾರಾಷ್ಟ್ರದ ಪುಣೆಗೆ ಬಸ್ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಘಟನೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ತೆರಳುವ ಬಸ್ಸುಗಳ ಸಂಚಾರವನ್ನು ಕೆಕೆಆರ್‌ಟಿಸಿ ಸ್ಥಗಿತಗೊಳಿಸಿದೆ. ಇಂದು ರಾತ್ರಿಯಿಂದಲೇ ಕರ್ನಾಟಕ ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.