ಕಾರ್ಕಳ :ಅಕ್ಟೋಬರ್ 31:ದ್ರಶ್ಯ ನ್ಯೂಸ್ : ಪ್ರಸ್ತುತ ಸಮಾಜದಲ್ಲಿ ಮಾನವ ಕಳ್ಳ ಸಾಗಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ ಮಕ್ಕಳು ಯುವತಿಯರು ಹಾಗೂ ಹೆಣ್ಣು ಮಕ್ಕಳನ್ನು ಬಲಿಪಶು ಮಾಡಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಮಕ್ಕಳ ಕಳ್ಳ ಸಾಗಣಿಕೆ ಗಂಭೀರ ವಿಷಯವಾಗಿದೆ ಮಕ್ಕಳನ್ನು ಅಪಹರಿಸಿ ಅಪರಾಧ ಚಟುವಟಿಕೆಗಳಲ್ಲಿ ಬಳಸಲಾಗುತ್ತಿದೆ, ಯುವತಿಯರಿಗೆ ಆಮಿಷ ಒಡ್ಡಿ ಅಕ್ರಮ ಚಟುವಟಿಕೆಗಳಿಗೆ ತಳ್ಳುವುದು ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಚೇತಕ್ ಯುವಕ ಮತ್ತು ಯುವತಿ ಮಂಡಲ ಹಿರಿಯoಗಡಿ ಕಾರ್ಕಳ, ಸ್ವಚ್ಛ ಬ್ರಿಗೇಡ್ ಕಾರ್ಕಳ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕಾರ್ಕಳ, ಜೆಸಿಐ ರೂರಲ್ ಕಾರ್ಕಳ ಪಡಿ ಸಂಸ್ಥೆ ಮಂಗಳೂರು ಎಲ್ಲರ ಸಹಯೋಗದಿಂದ ಓಯಸಿಸ್ ಇಂಡಿಯಾ ಬೀದಿ ನಾಟಕ ಕಾರ್ಯಕ್ರಮವನ್ನು ಅಕ್ಟೋಬರ್ 30ರಂದು ಕಾರ್ಕಳ ಬಸ್ ಸ್ಟಾಂಡ್ ನಲ್ಲಿ ಏರ್ಪಡಿಸಲಾಗಿತ್ತು
ಕಾರ್ಯಕ್ರಮದಲ್ಲಿ ಚೇತಕ್ ಯುವಕ ಮತ್ತು ಯುವತಿ ಮಂಡಲದ ಅಧ್ಯಕ್ಷರಾದ ಶ್ರೀಯುತ ಸತೀಶ್ ದೇವಾಡಿಗ, ಶ್ರೀಮತಿ ರೇಷ್ಮಾ ಭಂಡಾರಿ, ಸ್ವಚ್ಛ ಬ್ರಿಗೇಡ್ ಕಾರ್ಕಳದ ಹಿರಿಯ ಸದಸ್ಯರಾದ ಫಿಲಿಪ್ಸ್ ಡಿಸೋಜಾ, ವಸಂತ್ ಕುಮಾರ್ ,ಜೆ ಸಿ ಐ ರೂರಲ್ ಕಾರ್ಕಳದ ಅಧ್ಯಕ್ಷರಾದ ಶ್ರೀಯುತ ಮಂಜುನಾಥ್ ಕೋಟ್ಯಾನ್, ಪಡಿ ಸಂಸ್ಥೆಯ ನಿರ್ದೇಶಕರಾದ ರೆನ್ನಿ ಡಿಸೋಜಾ, ಕಾರ್ಯಕ್ರಮ ಸಂಯೋಜಕರಾದ ವಿವೇಕ್ ಕಾರ್ಕಳದ ಸಾಮಾಜಿಕ ಕಾರ್ಯಕರ್ತ ಮಾಜಿ ಪುರಸಭಾ ಸದಸ್ಯ ಶ್ರೀಯುತ ಪ್ರಕಾಶ್ ರಾವ್ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ದಿವಾಕರ್ ಕುಮಾರ್ ತಾಲೂಕ್ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ತರಬೇತುದಾರ ಶ್ರೀಮತಿ ಶೋಭಾ ಬಾಸ್ಕರ್, ಚೇತಕ್ ಯುವಕ ಮಂಡಲದ ನಿಕಟ ಪೂರ್ವ ಅಧ್ಯಕ್ಷ ರೋಶನ್ ರಾವ್, ಸಕ್ರಿಯ ಸದಸ್ಯರಾದ ಗುರುಪ್ರಸಾದ್ ರಾವ್, ಕೀರ್ತನ್ ದೇವಾಡಿಗ, ಧನುಷ್ ದೇವಾಡಿಗ, ಚೇತಕ್ ಯುವತಿ ಮಂಡಲದ ಉಪಾಧ್ಯಕ್ಷರಾದ ಶ್ರೀಮತಿ ಅರುಣ ದಿನೇಶ್, ಪದಾಧಿಕಾರಿಯದ ಶ್ವೇತಾ ರಾಜೇಶ್, ಶ್ರೀಮತಿ ಲವೀನಾ ಪಿರೇರಾ, ಶ್ರೀಮತಿ ಮಮತಾ ಹರೀಶ್, ಜೆಸಿಐ ರೂರಲ್ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವೀಣಾ ರಾಜೇಶ್, ಇವರೆಲ್ಲರೂ ಕಾ�