ಉಡುಪಿ, ಅಕ್ಟೋಬರ್ 28 : ದ್ರಶ್ಯ ನ್ಯೂಸ್ : ದಸರಾ ಮಹೋತ್ಸವ 2023 ರ ಅಂಗವಾಗಿ ಅಕ್ಟೋಬರ್ 24 ರಂದು ಮೈಸೂರಿನಲ್ಲಿ ನಡೆದ
ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ ಜಿಲ್ಲೆಯ ಸಿ. ಚಂದ್ರನಾಯ್ಕ್ ನೇತೃತ್ವದ ಹೆಗ್ಗುಂಜೆ ಶ್ರೀಮಲ್ಲಿಕಾರ್ಜುನ ಕುಡುಬಿ ಹೋಳಿ ಜಾನಪದ ಕಲಾಸಂಘವು ಗುಮಟೆ ನೃತ್ಯ ಪ್ರದರ್ಶಿಸಿ, ಪ್ರಥಮ ಸ್ಥಾನ ಪಡೆದು 15,000 ರೂ. ನಗದು ಬಹುಮಾನ ಪಡೆದಿರುತ್ತಾರೆ
ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.