ಉಡುಪಿ : ಅಕ್ಟೋಬರ್ 28: ದ್ರಶ್ಯ ನ್ಯೂಸ್ : ಅ. 29ರ ಮುಂಜಾನೆ ಉಡುಪಿಯವರಿಗೆ ರಾತ್ರಿ 1 ಗಂಟೆ 5 ನಿಮಿಷಕ್ಕೆ ಪ್ರಾರಂಭವಾಗಿ 2 ಗಂಟೆ 22 ನಿಮಿಷಕ್ಕೆ ಮುಗಿಯುತ್ತದೆ. ಇದನ್ನು ಬರೇ ಕಣ್ಣಿನಲ್ಲಿ ವೀಕ್ಷಿಸಬಹುದು ಎಂದು ಖಗೋಳ ಶಾಸ್ತ್ರಜ್ಞ ಡಾ| ಎ.ಪಿ. ಭಟ್ ತಿಳಿಸಿದ್ದಾರೆ.
ಪಿಲಿಕುಳದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ
ಮಂಗಳೂರು: ಅ. 28 ಮತ್ತು 29ರ ನಡು ರಾತ್ರಿಯಲ್ಲಿ ಸುಮಾರು 1.05 ಗಂಟೆಯಿಂದ 2.20ರ ವರೆಗೆ ಭಾಗಶಃ/ ಪಾರ್ಶ್ವ ಚಂದ್ರಗ್ರಹಣ ಸಂಭವಿಸ ಲಿದ್ದು, ಮಂಗಳೂರು ಸೇರಿದಂತೆ ರಾಜ್ಯದೆಲ್ಲೆ ಡೆಯೂ ಗೋಚರಿಸಲಿದೆ. ಗ್ರಹಣಾಸಕ್ತರಿಗೆ ಇದನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ದಲ್ಲಿ ಸಂಜೆ 7.30ರಿಂದ ಅವಕಾಶ ಕಲ್ಪಿಸಲಾಗಿದೆ.
ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರ ಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮತ್ತು ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಸಿಬಂದಿ ನೀಡಲಿದ್ದಾರೆ. ಆಸಕ್ತರಿಗೆ ಮುಕ್ತ ಅವಕಾಶವಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶ್ರೀಕೃಷ್ಣಮಠದಲ್ಲಿ ಇಂದು ರಾತ್ರಿ ಭೋಜನವಿಲ್ಲ
ಚಂದ್ರಗ್ರಹಣ ನಿಮಿತ್ತ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಅ. 28ರಂದು ದೈನಂದಿನ ಪೂಜಾ ಸಮಯದಲ್ಲಿ ಮತ್ತು ಭಕ್ತರ ದರ್ಶನದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ ಅಂದು ರಾತ್ರಿ ಭಕ್ತರಿಗೆ ಭೋಜನಪ್ರಸಾದ ಇರುವುದಿಲ್ಲ. ಸ್ವಾಮೀಜಿಯವರು ಉಪವಾಸ ವ್ರತ ಆಚರಿಸಲಿದ್ದಾರೆ.