ಮಂಗಳೂರು, ಅಕ್ಟೋಬರ್ 27:ಶಾಸಕ ಹರೀಶ್ ಪೂಂಜ ಹೆಸರು ಇರುವ ಫೇಸ್ಬುಕ್ ಪೇಜಲ್ಲಿ ಸಿಎಂ ಕಚೇರಿ, ಸಿಎಂ ಗೃಹಕಚೇರಿ ಹಾಗೂ ಸಿಎಂ ನಿವಾಸದ ಎದುರುಗಡೆ ಕಲೆಕ್ಷನ್ ಮಾಸ್ಟರ್ ಎಂದು ಬೋರ್ಡ್ ಹಾಕಿರುವ ಎಡಿಟ್ ಮಾಡಿರುವ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು ಇದೀಗ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ಈ ಕುರಿತಂತೆ ಐಪಿಸಿ ಸೆಕ್ಷನ್ 1869 U/S 545 ಹಾಗೂ 502 ಅಡಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ದೂರಿನ ಮೇರೆಗೆ ದಾಖಲಿಸಲಾಗಿದೆ ದಕ್ಷಿಣ ಕನ್ನಡ ಜಿಲ್ಲೆಬಲತಂಗಡಿ ಪೊಲೀಸ್ ಠಾಣೆಯಲ್ಲಿ ಅಪಾಯ ದಾಖಲಾಗಿದೆ
ಈ ಹಿಂದೆ ಚಾರ್ಮಾಡಿ ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ-ತೆರವು ಜಟಾಪಟಿ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಇದೀಗ ಕಲೆಕ್ಷನ್ ಮಾಸ್ಟರ್ ಎಂದು ಸಿಎಂ ಸಿದ್ದರಾಮಯ್ಯ ಫೋಟೋ ಎಡಿಟ್ ಮಾಡಿ ಪೋಸ್ಟ್ ಮಾಡಿದಕ್ಕೆ ಮತ್ತೆ ಎಫ್ಐಆರ್ ದಾಖಲಾಗಿದೆ.