ನವದೆಹಲಿ :ಅಕ್ಟೋಬರ್ 28 : ಪ್ರಗತಿ ಮೈದಾನದ ‘ಭಾರತ ಮಂಟಪ’ದಲ್ಲಿ ಏಳನೇ ಆವೃತ್ತಿಯ ‘ಇಂಡಿಯಾ ಮೊಬೈಲ್ ಕಾಂಗ್ರೆಸ್’ (ಐಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ, ದೇಶದಾದ್ಯಂತ ಆಯ್ದ ಶಿಕ್ಷಣ ಸಂಸ್ಥೆಗಳಿಗೆ 100 ‘5ಜಿ ಲ್ಯಾಬ್’ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿನ ದೈನಂದಿನ ಬದಲಾವಣೆಗಳೊಂದಿಗಿನ ಭವಿಷ್ಯ ಇಲ್ಲಿದೆ. ದೇಶದಲ್ಲಿ ನಾವು 5ಜಿ ಸೇವೆ ವಿಸ್ತರಿಸುವುದು ಮಾತ್ರವಲ್ಲದೆ 6ಜಿ ತಂತ್ರಜ್ಞಾನದಲ್ಲೂ ಮುಂಚೂಣಿಯತ್ತ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಅಧಿಕ ವೇಗದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸಲು ಉಪಗ್ರಹ ಆಧಾರಿತ ಭಾರತದ ಮೊದಲ ಗಿಗಾ ಫೈಬರ್ ಸೌಕರ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ ಎಂದು ರಿಲಯನ್ಸ್ ಜಿಯೊ ಘೋಷಿಸಿದೆ. ಜಿಯೊ ಪೆವಿಲಿಯನ್‌ನಲ್ಲಿ ರಿಲಯನ್ಸ್ ಜಿಯೊ ಇನ್ಫೋಕಾಮ್ ಲಿಮಿಟೆಡ್‌ನ ಮುಖ್ಯಸ್ಥ ಆಕಾಶ್ ಅಂಬಾನಿ ಅವರು, ದೇಶೀಯ ತಂತ್ರಜ್ಞಾನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದರು.