ಮಂಗಳೂರು:ಅಕ್ಟೋಬರ್ 25:ದ್ರಶ್ಯ ನ್ಯೂಸ್ : ಕುದ್ರೋಳಿ ದಸರಾ ಮೆರವಣಿಗೆ ನಿನ್ನೆ ಅದ್ದೂರಿಯಾಗಿ ಆರಂಭಗೊಂಡು ಇಂದು ಮುಂಜಾನೆ ಶಾರದೆಮಾತೆ, ಗಣಪತಿ, ಆದಿಶಕ್ತಿ, ಹಾಗೂ ನವದುರ್ಗೆಯರ ಮೂರ್ತಿಗಳನ್ನು ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ವಿಸರ್ಜಿಸುವ ಮೂಲಕ .ಸಮಾಪನಗೊಂಡಿತು
ಆಕರ್ಷಕ ಕೇರಳಾ ಕೊಡೆಗಳು,ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು,ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳಾ ಚೆಂಡೆವಾದನ, ಕೊಂಬು ಕಹಳೆ, ಸುಮಾರು 60ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಈ ದಸರಾ ಮೆರವಣಿಗೆಗೆ ಮೆರಗು ನೀಡಿತು.
ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿತ್ತು.
ನವದುರ್ಗೆಯರ ವೈಭವದ ಶೋಭಾಯಾತ್ರೆಯಲ್ಲಿ ಸರ್ವ ಧರ್ಮೀಯರು ಭಾಗವಹಿಸಿದ್ದು ಮಾತ್ರವಲ್ಲದೆ ಶಾಂತಿ ಸಹಬಾಳ್ವೆಯ ಸ್ಥಬ್ದ ಚಿತ್ರ ಕೂಡಾ ಮೂಡಿ ಬಂದಿತ್ತು.
ಕುದ್ರೋಳಿ ಕ್ಷೇತ್ರದಿಂದ ಈ ಬಾರಿ ಸರ್ವ ಧರ್ಮೀಯರ ಟ್ಯಾಬ್ಲೋಗೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಲಾಗಿತ್ತು.ಈ ಹಿನ್ನಲೆಯಲ್ಲಿ ಈ ಸ್ತಬ್ದ ಚಿತ್ರವನ್ನು ನಾರಾಯಣ ಗುರುಗಳ ಸಂದೇಶ ಸಾರುವ ಆಶಯದಂತೆ ಸಿದ್ಧಗೊಳಿಸಲಾಗಿತ್ತು.