ಚಿಕ್ಕಮಗಳೂರು :ಅಕ್ಟೋಬರ್ 25:ದ್ರಶ್ಯ ನ್ಯೂಸ್: ಪೊಲೀಸ್ ಇಲಾಖೆಯಲ್ಲಿ ಹಲವು ಪ್ರಕರಣದಲ್ಲಿ ಆರೋಪಿಗಳು ಪತ್ತೆ ಹಚ್ಚುವುದರ ಜೊತೆ ಕಳ್ಳತನ, ದರೋಡೆ ಹಾಗೂ ಕೊಲೆ ಕೇಸ್‍ಗಳಲ್ಲಿ ಆರೋಪಿಗಳನ್ನ ಪತ್ತೆ ಹಚ್ಚಿ 10 ವರ್ಷಗಳ ಕಾಲ ಸೇವೆ ಸಲ್ಲಿಸಿ ಶ್ವಾನಕ್ಕೆ ಪೊಲೀಸ್ ಇಲಾಖೆ ಬೀಳ್ಕೊಡುಗೆ ನೀಡಿದೆ.
ನಗರದ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ರಾಮನಹಳ್ಳಿ, ಹುತಾತ್ಮರ ಸ್ಮಾರಕದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿ ಮೀನಾನಾಗರಾಜ್ ಶ್ವಾನ ಟಿಪ್ಪು ಕರ್ತವ್ಯದಿಂದ ನಿವೃತ್ತಗೊಂಡ ಹಿನ್ನೆಲೆಯಲ್ಲಿ ಶಾಲು ಹೊದಿಸಿ ಮಣಿಹಾರ ಹಾಕಿ ಬೀಳ್ಕೊಡುಗೆ ನೀಡಲಾಯಿತು