ಉಡುಪಿ : ಅಕ್ಟೋಬರ್ : 24: ದೃಶ್ಯ ನ್ಯೂಸ್ : ಉಡುಪಿ ಶ್ರೀ ಕೃಷ್ಣ ಮಠದಲ್ಲಿವಿಜಯದಶಮಿ ಪರ್ವದಿನವಾದ ಇಂದು ಕದಿರು ಪೂಜೆ ನೆರವೇರಿಸಲಾಯಿತು.
ಸೋದೆ ಮಠದ ಹೆಬ್ಬಾಗಿಲಿನಲ್ಲಿರಿಸಿದ ಕದಿರಿಗೆ ಪರ್ಯಾಯ ಕೃಷ್ಣಾಪುರ ಮಠದ ಪುರೋಹಿತ ಶ್ರೀನಿವಾಸ ಉಪಾಧ್ಯಾಯ ಪೂಜೆಯನ್ನು ಸಲ್ಲಿಸಿದರು. ಬಳಿಕ ಕದಿರನ್ನು ವಾದ್ಯ, ಸಕಲ ಬಿರುದಾವಳಿಗಳೊಂದಿಗೆ ಚಿನ್ನದ ಪಲ್ಲಕಿಯಲ್ಲಿರಿಸಿ ಮೆರವಣಿಗೆಯಲ್ಲಿ ತರಲಾಯಿತು.
ಗರ್ಭಗುಡಿಯ ಪೂರ್ವದ್ವಾರದಿಂದ ಪ್ರವೇಶಿಸಿ, ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪೂಜೆ ನಡೆಸಲಾಯಿತು. ನಂತರ ಬಡಗುಮಾಳಿಗೆಯಲ್ಲಿರಿಸಿ ಪೂಜೆ ಸಲ್ಲಿಸಿದ ಬಳಿಕ ನೆರೆದಿರುವ ಭಕ್ತಾದಿಗಳಿಗೆ ಕದಿರನ್ನು ವಿತರಣೆ ಮಾಡಲಾಯಿತು.