ಕಾರ್ಕಳ : ಅಕ್ಟೋಬರ್: 24: ದೃಶ್ಯ ನ್ಯೂಸ್ : ನವರಾತ್ರಿಯ ಪ್ರಯುಕ್ತ ಪಳ್ಳಿ ಸೇವಾ ಬಳಗದ ವತಿಯಿಂದ ಬಡವರ ಸೇವೆಯೇ ದೇವರ ಸೇವೆ ಎಂಬ ಸಂಕಲ್ಪದೊಂದಿಗೆ ಸಿದ್ಧಕಟ್ಟೆಯ ಕರ್ಪೆ ಗ್ರಾಮದ ಪವಿತ್ ಎಂಬ ಮಗುವಿನ ಹೃದಯ ಚಿಕಿತ್ಸೆಗಾಗಿ ಭವತಿ ಭಿಕ್ಷಾಂದೇಹಿಯಲ್ಲಿ ಒಟ್ಟಾದ ಹಣದ ಹಸ್ತಾಂತರ ಕಾರ್ಯಕ್ರಮ ಇಂದು ನಡೆಯಿತು
ಭವತಿ ಭಿಕ್ಷಾಂದೇಹಿ ನಿಧಿ ಸಂಗ್ರಹಣ ಅಭಿಯಾನದಲ್ಲಿ ಒಟ್ಟಾದ 51,000/- ರೂಪಾಯಿಯನ್ನು ಪಳ್ಳಿ ಸತ್ಯ ಸತ್ಯಸಾರ ಸಾರಮಣಿ ದೇವಸ್ಥಾನದ ಸನ್ನಿಧಿಯ ಮುಂಭಾಗದಲ್ಲಿ ಫಲಾನುಭವಿಯ ಮನೆಯವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಹರಿಪ್ರಸಾದ್ ನಂದಳಿಕೆ, ಸಂತೋಷ್ ಪಳ್ಳಿ, ಕೃಷ್ಣ, ಹರೀಶ್, ಸುಭಾಸ್, ಪ್ರಶಾಂತ, ಭಾಸ್ಕರ, ನಾಗರಾಜ ಆಧಿತ್ಯ, ಶಿರಿಧರ, ಸಂದೀಪ್, ಅಶೋಕ್, ಗಿರೀಶ್ ಹಾಗೂ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ತಂಡದ ಪರವಾಗಿ ಧನ್ಯವಾದ ಸಮರ್ಪಿಸಲಾಯಿತು.