ಉಡುಪಿ : ಅಕ್ಟೋಬರ್ 24:ದ್ರಶ್ಯ ನ್ಯೂಸ್ : ಮನೆ ಎದುರಿನ ಬಾವಿಯಲ್ಲಿ ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾನಂದ ಕುಂದರ್ (65ವ) ಶವ ಪತ್ತೆಯಾಗಿರುವ ಘಟನೆ ಒಳಕಾಡುನಲ್ಲಿರುವ ನಾರಾಯಣ ರಾವ್ ಕಂಪೌಂಡಿನಲ್ಲಿ ನಡೆದಿದೆ.
ಘಟನಾ ಸ್ಥಳದಲ್ಲಿದ್ದು ನಗರ ಪೋಲಿಸ್ ಠಾಣೆಯ ಎ.ಎಸ್.ಐ ಅರುಣ್ ಹಂಗಾರಕಟ್ಟೆ, ಹೆಡ್ ಕಾನ್ಸ್ಟೇಬಲುಗಳಾದ ಹರೀಶ್ ನಾಯ್ಕ್, ಶಂಕರ್ ಕಾನೂನು ಪ್ರಕ್ರಿಯೆ ನಡೆಸಿದ್ದಾರೆ , ಸಾವಿನ ಕಾರಣ ಪೋಲಿಸ್ ತನಿಖೆಯಿಂದ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಶವ ಬಾವಿಯಿಂದ ತೆರವುಗೊಳಿಸಲು ಅಗ್ನಿಶಾಮಕ ದಳ ಸಹಕರಿಸಿದೆ. ಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಜಿಲ್ಲಾಸ್ಪತ್ರೆಯ ವೈದ್ಯಕೀಯ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾಗಿದ್ದಾರೆ