ಶಿವಮೊಗ್ಗ: ಅಕ್ಟೋಬರ್: 24: ದೃಶ್ಯ ನ್ಯೂಸ್ : ಜಂಬೂ ಸವಾರಿಯಲ್ಲಿ ಭಾಗವಹಿಸಲು ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದ ಘಟನೆ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕೋಟೆ ರಸ್ತೆಯ ವಾಸವಿ ಶಾಲೆ ಆವರಣದಲ್ಲಿ ಆನೆ ಹೆಣ್ಣು ಮರಿಗೆ ಜನ್ಮ ನೀಡಿದೆ.
ಇಂದು ದಸರಾ ಮೆರವಣಿಗೆಯ ಜಂಬೂ ಸವಾರಿಯಲ್ಲಿ ಭಾಗವಹಿಸಲು 28 ವರ್ಷದ ನೇತ್ರಾವತಿ ಸಕ್ರೇಬೈಲು ಆನೆ ಬಿಡಾರದಿಂದ ಆಗಮಿಸಿತ್ತು. ಇದೀಗ ನೇತ್ರಾವತಿ ಆನೆ 5ನೇ ಬಾರಿ ಮರಿ ಹಾಕಿದೆ. ಸದ್ಯ ಬಾಣಂತಿ ಆನೆಯ ಆರೈಕೆಯಲ್ಲಿ ಮಾವುತರು, ಕಾವಾಡಿಗರು ತೊಡಗಿದ್ದಾರೆ ಎಂದು ತಿಳಿದುಬಂದಿದೆ.