ಬೆಂಗಳೂರು: ಅಕ್ಟೋಬರ್: 24: ದೃಶ್ಯ ನ್ಯೂಸ್ : ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಹೌದು. . .
ರಾಜ್ಯ ಸರ್ಕಾರ ಅಪ್ಪು ಹೆಸರಿನಲ್ಲಿ ಐ ಬ್ಯಾಂಕ್ ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ದಿನದಿಂದ ದಿನಕ್ಕೆ ದೃಷ್ಟಿ ದೋಷದಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಅನೇಕ ಕಾರಣಗಳಿಂದ ಕಣ್ಣು ಕಳೆದುಕೊಂಡವರು, ಇದೀಗ ಜಗತ್ತನ್ನ ನೋಡಲು ಹತೋರೆಯುತ್ತಿದ್ದಾರೆ. ಅಂತವರಿಗೆ ದೃಷ್ಟಿ ಭಾಗ್ಯ ಕಲ್ಪಿಸಲೆಂದೇ ಆರೋಗ್ಯ ಇಲಾಖೆ ನೇತ್ರದಾನ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದೆ.
ಡಾ.ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಐ ಬ್ಯಾಂಕ್ ತೆರೆಯಲು ಸಿದ್ಧತೆ ಮಾಡಿಕೊಂಡಿದೆ. 2021ರ ಅಕ್ಟೋಬರ್ ನಿಂದ ಇಲ್ಲಿಯವರೆಗೆ ನಾರಾಯಣ ನೇತ್ರಾಲಯದಲ್ಲಿ ನೋಂದಣಿ ಮಾಡ್ಕೊಂಡವರ ಸಂಖ್ಯೆ 1 ಲಕ್ಷದ 40 ಸಾವಿರಕ್ಕೂ ಅಧಿಕ ಎಂಬ ಮಾಹಿತಿಯಿದೆ. ಈ ಕಾರಣದಿಂದ ಅಪ್ಪು ಹೆಸರಲ್ಲಿಯೇ ಐ ಬ್ಯಾಂಕ್ ತೆರೆಯಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.