ಮಂಗಳೂರು: ಅಕ್ಟೋಬರ್: 23: ದೃಶ್ಯ ನ್ಯೂಸ್ : ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಜಾತ್ರೆಯಲ್ಲಿನ ದೃಶ್ಯವೊಂದು ವೈರಲ್ ಆಗಿದೆ. ಮಟ್ಕಾ ಸೋಡಾ ವ್ಯಾಪಾರಿಗಳು ಜನರ ಆರೋಗ್ಯದ ಜೊತೆ ಆಟ ಆಡುತ್ತಿರುವ ಘಟನೆಯೊಂದು ನಡೆದಿದೆ. ವೈರಲ್ ಆಗಿರುವ ದೃಶ್ಯದಲ್ಲಿ ವ್ಯಕಿಯೊಬ್ಬ ತನ್ನ ಕೊಳಕು ಕೈಗಳಿಂದ ಕಲುಷಿತ ನೀರಿನಲ್ಲಿ ಮಡಕೆಗಳನ್ನು ತೊಳೆದು ಅದರಲ್ಲಿಯೇ ಸೋಡ ಹಾಕಿ ಗ್ರಾಹಕರಿಗೆ ನೀಡಿದ್ದಾರೆ.
ಈ ಮೂಲಕ ಗ್ರಾಹಕರ ಆರೋಗ್ಯದ ಜೊತೆ ಮಟ್ಕಾ ಸೋಡಾ ವ್ಯಾಪಾರಿಗಳು ಆಟ ಆಡುತ್ತಿರುವ ದೃಶ್ಯವೊಂದನ್ನು ಗ್ರಾಹಕರು ಸೆರೆಹಿಡಿದ್ದಾರೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ವಿಡಿಯೋ ವೈರಲ್ ಬೆನ್ನಲ್ಲೇ ಇಂದು ಪಾಲಿಕೆ ಆರೋಗ್ಯಾಧಿಕಾರಿಗಳ ದಾಳಿ ನಡೆಸಿ ಮಟ್ಕಾ ಸೋಡಾ ಶಾಪ್ ಅನ್ನು ಅಧಿಕಾರಿಗಳು ಸೀಝ್ ಮಾಡಿದ್ದಾರೆ.
ಅಲ್ಲದೆ ಮಟ್ಕಾ ಸೋಡಾ ಪಾಟ್ ಸಹಿತ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಕುದ್ರೋಳಿ ಜಾತ್ರೆಯ ಉಳಿದ ಸ್ಟಾಲ್ ಗಳಲ್ಲೂ ಶುಚಿತ್ವದ ಪರಿಶೀಲನೆ ನಡೆಸಿದ್ದು, ಶುಚಿತ್ವ ಕಾಪಾಡದೇ ಇದ್ದಲ್ಲಿ ಸ್ಟಾಲ್ ಸೀಝ್ ಮಾಡುವ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡಿದೆ.