ಮೈಸೂರು : ಅಕ್ಟೋಬರ್ 23:ದ್ರಶ್ಯ ನ್ಯೂಸ್ : ಈ ಬಾರಿ ಮಳೆಯ ಅಭಾವದಿಂದಾಗಿ ರೈತರಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ರೈತರಿಗೆ ಐದು ಗಂಟೆಗಳ ನಿರಂತರ ವಿದ್ಯುತ್ ಪೂರೈಕೆಗೆ ಆದೇಶ ನೀಡಲಾಗಿದೆ. ಆದರೆ ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಭತ್ತ ಬೆಳೆಯುವ ರೈತರಿಗೆ ಏಳು ಗಂಟೆ ವಿದ್ಯುತ್ ನೀಡಲು ಆದೇಶಿಸಿದೆ.
ಸುಮಾರು 2 ಸಾವಿರ ವ್ಯಾಟ್ ವರೆಗೆ ವಿದ್ಯುತ್ ಖರೀದಿ ಮಾಡಬೇಕಾಗಿದೆ. ಕೋಜನರೇಶನ್ ವ್ಯವಸ್ಥೆಯ ಮೂಲಕ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಇಂದು ಮೈಸೂರು ಜಿಲ್ಲಾಡಳಿತ ಮತ್ತು ಭಾರತೀಯ ವಾಯುಪಡೆ ವತಿಯಿಂದ ನಾಡಹಬ್ಬ ದಸರಾ 2023 ವೈಮಾನಿಕ ಪ್ರದರ್ಶನ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಎಂಬುದು ನಾಡ ಹಬ್ಬ, ಜನರ ಹಬ್ಬ. ಆದರೆ ಈ ಬಾರಿ ಬರಗಾಲವಿದೆ. ಆದರೂ ಜನ ದಸರಾದ ಸಂಭ್ರಮವನ್ನು ಸವಿಯುತ್ತಿರುವುದು ಸಂತೋಷದ ವಿಷಯ ಎಂದರು
ಮೈಸೂರು ದಸರಾ ಸಂದರ್ಭದಲ್ಲಿ ಏರ್ ಶೋ ಏರ್ಪಡಿಸಲು ಕೇಂದ್ರ ಸಚಿವರನ್ನು ಕೋರಲಾಗಿತ್ತು. ಅದರಂತೆ ಏರ್ ಶೋವನ್ನು ಏರ್ಪಡಿಸಲಾಗಿದೆ. ಹಿಂದೆ ಶ್ರೀಮತಿ ನಿರ್ಮಲಾ ಸೀತರಾಮನ್ ಅವರು ರಕ್ಷಣಾ ಸಚಿವರಾಗಿದ್ದಾಗ, ಇದೇ ರೀತಿ ಏರ್ ಶೋ ವನ್ನು ಏರ್ಪಡಿಸಲಾಗಿತ್ತು. ದಸರಾ ರಜೆಯ ಸಂದರ್ಭವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ, ಏರ್ ಶೋವನ್ನು ವೀಕ್ಷಿಸುತ್ತಿದ್ದಾರೆ. ಈ ಬಾರಿ ಬರಗಾಲವಿದೆ. ಆದರೂ ಜನ ದಸರಾದ ಸಂಭ್ರಮವನ್ನು ಸವಿಯುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.