ಉಡುಪಿ, ಅ. 23: ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ವೇಮೂ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ವೇಮೂ ನಾರಾಯಣ ತಂತ್ರಿಗಳ ಪೌರೋಹಿತ್ಯದಲ್ಲಿ ದುರ್ಗಾಷ್ಟಮಿ ಪರ್ವಕಾಲದಲ್ಲಿ ಗಾಯತ್ರಿ ಧ್ಯಾಾನಪೀಠದಲ್ಲಿ ವೇದ ಮಾತೆ ಶ್ರೀ ಗಾಯತ್ರಿ ದೇವಿಯ ನೂತನ ಶಿಲಾಮಯ ಗುಡಿಗೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ರವಿವಾರ ಶಿಲಾ ಮುಹೂರ್ತ ನೆರವೇರಿಸಿದರು.
ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಮತ್ತು ನಾಗರಾಜ ಆಚಾರ್ಯ ಹಾಗೂ ಮುಂಬಯಿಯ ಸಂತೋಷ್ ಜನ್ನ ಅವರ ಸೇವಾರ್ಥವಾಗಿ ಜೋಡಿ ಚಂಡಿಕಾಯಾಗ ಸಮರ್ಪಿಸಲ್ಪಟ್ಟಿತು. ರೋಹಿಣಿ ಶೆಟ್ಟಿಗಾರ್, ಲಾವಣ್ಯಾ, ಪ್ರಾಾಪ್ತಿ ಹಾಗೂ ರಕ್ಷಿತಾ ಮತ್ತು ಪ್ರಿತುಲ್ ಕುಮಾರ್ ಅವರ ಸೇವಾರ್ಥವಾಗಿ ತುಲಾಭಾರ ಸೇವೆ ನೆರವೇರಿತು.
ಸಂಜೀವ ಪೂಜಾರಿ ಬೈಲೂರು ಹಾಗೂ ರಕ್ಷಿತಾ ಮತ್ತು ಪ್ರಿಿತುಲ್ ಕುಮಾರ್ ಅವರ ಸೇವಾರ್ಥವಾಗಿ ದುರ್ಗಾನಮಸ್ಕಾಾರ ಪೂಜೆ ನಡೆಯಿತು. ಕ್ಷೇತ್ರದ ಅಲಂಕಾರ ತಜ್ಞ ಆನಂದ ಬಾಯರಿಯವರು ಸ್ವಸ್ತಕ್ ಆಚಾರ್ಯರ ಸಹಕಾರದೊಂದಿಗೆ ಶ್ರೀ ದೇವಿಯನ್ನು ಗೌರಿಯಾಗಿ ಅಲಂಕರಿಸಿದ್ದರು. ಅರ್ಚಕ ಅನೀಶ್ ಭಟ್ ಪೂಜಾ ವಿಧಿವಿಧಾನ ನಡೆಸಿದರು.
ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆಯನ್ನು ಬೆಂಗಳೂರಿನ ಶಾಂಭವಿ ಅಕಾಡೆಮಿಯ ಯೋಗಿ ಪುಲಕೇಶಿ ಅವರ ಶಿಷ್ಯ ಶ್ರವಣ್ ಕುಮಾರ್, ಬ್ರಾಾಹ್ಮರಿ ನಾಟ್ಯಾಾಲಯದ ಪ್ರಥಮ್, ಪ್ರಜ್ವಲ್, ಹಿಮಗೌರಿ, ಮಣಿಪಾಲ ಎಂಐಟಿ ವಿದ್ಯಾರ್ಥಿ ಇಶಾನ್ ಕೌಂಡಿನ್ಯ ಹಾಗೂ ಪ್ರಸಿದ್ಧ ನೃತ್ಯ ಸಂಸ್ಥೆಗಳ ನೃತ್ಯಾಾರ್ಥಿಗಳು ದೇವಿಗೆ ಅಭಿಮುಖವಾಗಿ ಸಮರ್ಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನವಶಕ್ತಿ ವೇದಿಕೆಯಲ್ಲಿ ವಸಂತ್ ಅವರ ನೇತೃತ್ವದ ಹೆಸರಾಂತ ನೃತ್ಯ ಸಂಸ್ಥೆ ‘ವಿ-ರೋಕ್’ ಅವರಿಂದ ವೈವಿಧ್ಯಮಯ ನೃತ್ಯ ವೈಭವ, ಉದ್ಯಾಾವರ ಬಾಲಗಣಪತಿ ಭಜನ ಮಂಡಳಿಯಿಂದ ಕುಣಿತ ಭಜನೆ ಜರಗಿತು ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾರೆ.
ಉತ್ತರಾಯಣದಲ್ಲಿ ಪ್ರತಿಷ್ಠೆ
ಗಾಯತ್ರಿ ದೇವಿಯು ‘ವೇದ ಮಾತೆ’ ಎಂದು ಕರೆಯಲ್ಪಡುತ್ತಾಾಳೆ. ಈಕೆಯನ್ನು ಪುರುಷ ರೂಪ ಮತ್ತು ಸ್ತ್ರೀರೂಪದಲ್ಲಿಯೂ ಪೂಜಿಸುವವರಿದ್ದಾರೆ. ಹಿಂದೂ ಧರ್ಮದ ಪ್ರಕಾರ ವೇದವೇ ಮೂಲ. ವೇದದಿಂದಲೇ ಎಲ್ಲವನ್ನೂ ತಿಳಿದುಕೊಳ್ಳಲಾಗಿದೆ. ವಿಶೇಷವಾದ ಜ್ಞಾನ, ಬುದ್ಧಿ ಶಕ್ತಿಯನ್ನು ಅನುಗ್ರಹಿಸುವ ವರದಾತೆಯೂ ಹೌದು. ಕ್ಷೇತ್ರದ ಗಾಯತ್ರಿ ಧ್ಯಾಾನಪೀಠದಲ್ಲಿ ಕಪಿಲ ಮಹರ್ಷಿಗಳ ಸಾನಿಧ್ಯವಿದೆ. ಅಂತಹ ಮಹಿಮಾನ್ವಿತ ಮಹರ್ಷಿಗಳನ್ನು ಅನುಗ್ರಹಿಸಿದ ದೇವಿಗೂ ಸ್ಥಾಾನ ಸಂಕಲ್ಪಿಸಿ ಶಿಲಾನ್ಯಾಾಸ ನೆರವೇರಿಸಲಾಗಿದೆ. ಈ ಸಾನ್ನಿಧ್ಯವು ಉತ್ತರಾಯಣ ಕಾಲದಲ್ಲಿ ಪ್ರತಿಷ್ಠಾಾಪನೆಗೊಂಡು ಲೋಕಾರ್ಪಣೆಗೊಳ್ಳಲಿದೆ ಎನ್ನುತ್ತಾರೆ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ.ನೆರವೇರಿಸಿದರು.
ದೊಡ್ಡಣಗುಡ್ಡೆ ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ವೇಮೂ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ನಿರಂತರವಾಗಿ ದೀಪಾರಾಧನೆ ಸಹಿತ ರಂಗಪೂಜಾ ಮಹೋತ್ಸವ ನೆರವೇರುತ್ತಿದೆ.
ಅ. 23ರಂದು ಕಾಸರಗೋಡಿನ ದುರ್ಗಾ ನಾಟ್ಯಾಲಯದ ಕಲಾವಿದರಿಂದ ಕ್ಷೇತ್ರದ ಆವರಣದಲ್ಲಿ ಬೆಳಗ್ಗಿನಿಂದ ರಾತ್ರಿಯ ವರೆಗೆ ನೃತ್ಯ ಸಂಗೀತ ನೆರವೇರಲಿದೆ. ಅ. 24ರಂದು ನಡೆಯಲಿರುವ ಮಹಾನ್ ಯಾಗದ ಪ್ರಯುಕ್ತ ನಡೆಯಲಿರುವ ಅನ್ನಸಂತರ್ಪಣೆಗೆ ಹಸುರು ಹೊರೆಕಾಣಿಕೆ ನೀಡಲಿಚ್ಛಿಸುವವರು ಅ. 23ರ ಸಂಜೆಯ ಒಳಗೆ ನೀಡಲು ಅವಕಾಶವಿದೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ತಿಳಿಸಿದ್ದಾಾರೆ.
ಕೀರ್ತಿ, ಯಶಸ್ಸು, ಧನ ಪ್ರಾಪ್ತಿ
ಶರನ್ನವರಾತ್ರಿ ಪರ್ವಕಾಲದಲ್ಲಿ ಸಣ್ಣ ರಂಗಪೂಜೆಯು ದೀಪಾರಾಧನೆ ಸಹಿತ ಭಕ್ತರ ಸೇವಾರ್ಥವಾಗಿ ನೆರವೇರುತ್ತಿದ್ದು, ವಿಜಯದಶಮಿ ಪರ್ವಕಾಲದಲ್ಲಿ ದೊಡ್ಡ ರಂಗಪೂಜೆಯು ಬಲಿಉತ್ಸವದೊಂದಿಗೆ ನೆರವೇರುತ್ತದೆ.
ಅದು ನವರಾತ್ರಿಯ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮಂಗಳ ಪ್ರಕ್ರಿಯೆಯಾಗಿದೆ. ಅಂದು ದೊಡ್ಡ ರಂಗಪೂಜೆಯು ದೇವರ ದ್ವಾರ, ಧ್ವಜಸ್ತಂಭ ಮಂಟಪಾದಿ ಪರ‌್ಯಂತ ಮೇಲ್ಕಟ್ಟು, ಕೆಳಗೆ ಪ್ರಕ್ಷಾಾಳಿತವಾದ ಮರದ ಹಲಗೆಯ ಮೇಲೆ ಶುದ್ಧವಸ್ತ್ರ ಸುಪತ್ರದಲ್ಲಿ ಶುದ್ಧಾನ್ನ, ನಾಳಿಕೇರಖಂಡ, ಅಪೋಪ, ಗುಡ, ಘೃತ, ಕದಳೀ ಪಕ್ವ ಪೊಗಪುಷ್ಪ (ಕೇಪಳ ಹೂವು) ಪ್ರಮುಖ ತಾಂಬೂಲ ಪಾರ್ಶ್ವದ್ವಯದಲ್ಲಿ ಅನೇಕಾನೇಕ ದೀಪಗಳಿಂದ ಯುಕ್ತವಾಗಿ ಎದುರಿಗೆ ಪಂಚದೀಪವನ್ನು ಬೆಳಗಿಸಿ, ದೇವರ ಧ್ಯಾನವನ್ನು ಉಲಿಯಲಾಗುತ್ತದೆ. ದೇವಿಯ ಅಲಂಕಾರದಿಂದಿಗೆ ಆಕೆಯ ಮಹಿಮೆಯ ಗುಣಗಾನವನ್ನು ಮಾಡಲಾಗುತ್ತದೆ. ಭಕ್ತರು ತದೇಕಚಿತ್ತರಾಗಿ ಆಧ್ಯಾಾನವನ್ನು ಆಲಿಸಿ, ದೇವರಿಗೆ ಬಡಿಸಿದ ನೈವೇದ್ಯವನ್ನು ಪಂಚದೀಪದ ಮುಖೇನ ಕಂಡು ಸರ್ವಾಲಂಕಾರ ಭೂಷಿತಳಾದ ದೇವಿಯ ಬಿಂಬವನ್ನು ಮನ ತುಂಬಿಕೊಂಡು ಮನದಿಚ್ಛೆಯನ್ನು ನಿವೇದಿಸಿಕೊಳ್ಳುವುದಾಗಿದೆ.
ಸಮಸ್ತ ದೇವತೆಗಳಿಗೆ ನೈವೇದ್ಯ ನೀಡುವ ಕ್ರಮವೇ ರಂಗಪೂಜೆ. ಸರ್ವಾಭೀಷ್ಟ ಸಿದ್ಧಿ, ಷೋಡಷಾದಿ ಸಂಸ್ಕಾಾರ, ಮೋಕ್ಷ, ಆರೋಗ್ಯಕ್ಕಾಾಗಿ ರಂಗಪೂಜೆಯನ್ನು ಸಮರ್ಪಿಸಬಹುದು. ಇದರಿಂದ ಸರ್ವ ಶಾಪ ಪರಿಹಾರವಾಗಿ ಕೀರ್ತಿ, ಯಶಸ್ಸು, ಧನ, ಸುಖ, ಪುತ್ರಾಾದಿ ಅಭಿವೃದ್ಧಿ ಲಭಿಸಲಿದೆ ಎನ್ನುತ್ತಾರೆ ಶ್ರೀ ರಮಾನಂದ ಗುರೂಜಿಯವರು.
ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ಮುಖ್ಯಸ್ಥೆ ವಿ ಯಶಾ ರಾಮಕೃಷ್ಣ ಅವರನ್ನು ಶ್ರೀ ರಮಾನಂದ ಗುರೂಜಿಯವರು ದೇವಿಯ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ದೊಡ್ಡಣಗುಡ್ಡೆ: ಶಾಸಕರ ಭೇಟಿ
ಶರನ್ನವರಾತ್ರಿ ಮಹೋತ್ಸವಕ್ಕೆ ಶಾಸಕ ಯಶ್‌ಪಾಲ್ ಎ. ಸುವರ್ಣ ಭೇಟಿ ನೀಡಿದರು. ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರು ಶಾಸಕರನ್ನು ಬರಮಾಡಿಕೊಂಡು ಶ್ರೀ ದೇವರ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಶಾಸಕರು, ಕ್ಷೇತ್ರವು ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿಿರುವುದಲ್ಲದೆ, ಕ್ಷೇತ್ರದ ಕಾರಣಿಕತೆಯಿಂದ ದೂರದ ಭಕ್ತರೂ ಆಗಮಿಸುತ್ತಿದ್ದಾರೆ. ಉಡುಪಿಯ ಅಭಿವೃದ್ಧಿಗೆ ಧಾರ್ಮಿಕ ಪ್ರವಾಸೋದ್ಯಮಕ್ಕೆ ಈ ಕ್ಷೇತ್ರ ಸಹಕಾರಿಯಾಗಿದೆ ಎಂದು ಅಭಿಪ್ರಾಾಯಪಟ್ಟರು.
ಕ್ಷೇತ್ರದ ಆನಂದ ಬಾಯರಿ ಹಾಗೂ ಆಡಳಿತ ಮಂಡಳಿಯವರು, ಭಕ್ತರು ಉಪಸ್ಥಿತರಿದ್ದರು.