ಕಾರ್ಕಳ: ಅಕ್ಟೋಬರ್ 21:ದ್ರಶ್ಯ ನ್ಯೂಸ್ :ನಿಟ್ಟೆ ಶ್ರೀ ಶಾರದಾ ಪೂಜಾ ಮಹೋತ್ಸವ ,ನಿಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಾರದಾ ಪೂಜಾ ಮಹೋತ್ಸವ ದಿನಾಂಕ 20/10/2023ಶುಕ್ರವಾರ ಮತ್ತು 21/10/2023.ಶನಿವಾರದಂದು 9ನೇಯ ವರ್ಷದ ಶಾರದಾ ಪೂಜಾ ಮಹೋತ್ಸವ ಸಮಾರಂಭ ವಿಜೃಂಭಣೆ ಯಿಂದ ಶಾರದಾ ದೇವಿಯ ಪ್ರತಿಷ್ಟಾಪನೆ ಮಹಾ ಪೂಜೆ ಅನ್ನ ಸಂತರ್ಪಣೆ ,ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಶನಿವಾರ ಸಾಯಂಕಾಲ ಶಾರದಾ ದೇವಿಯ ವಿಗ್ರಹ ವಿಸರ್ಜನಾ ಪೂಜೆ ,ಪ್ರಸಾದ ವಿತರಣೆ,ಹಾಗೂ ಮೆರವಣಿಗೆಯೊಂದಿಗೆ ವಿಗ್ರಹವನ್ನು ಶಾಂಭವಿ ನದಿಯಲ್ಲಿ ಜಲಸ್ತಂಭನ ವಿಜೃಂಭಣೆಯಿಂದ ನಡೆಯಿತು.
ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿಯ ಅದ್ಯಕ್ಷರು ಬೆಳ್ಳಿಪ್ಪಾಡಿ ನೇಮಿರಾಜ್ ರೈ, ಮಾದ್ಯಮಕ್ಕೆ ಕಾರ್ಯಕ್ರಮದ ಕುರಿತು ವಿವರ ನೀಡಿದರು, ಅದ್ಯಕ್ಷರು, ಬೆಳ್ಳಿಪ್ಪಾಡಿ ನೆಮಿರಾಜ ರೈ, ಹಾಗೂ ಉಪಾಧ್ಯಕ್ಷರು ಮನ್ಮಥ ಕುಮಾರ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ದಿವಾಕರ್ ದೇವಾಡಿಗ, ಕೋಶಾಧಿಕಾರಿ ಸುರೇಶ್ ಶೆಟ್ಟಿ ,ಹಾಗೂ ಸಮಿತಿಯ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.