ಉಡುಪಿ: ಅಕ್ಟೋಬರ್ 20:ದ್ರಶ್ಯ ನ್ಯೂಸ್: ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಲಲಿತಾ ಪಂಚಮಿಯ ಪರ್ವಕಾಲದಲ್ಲಿ ಜೋಡಿ ಲಲಿತಾ ಸಹಸ್ರ ಕದಳಿ ಯಾಗ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಋತ್ವಿಜರ ಸಹಕಾರದೊಂದಿಗೆ ಸೇವ್ ಆರ್ತಿಗಳ ಸಮಕ್ಷಮದಲ್ಲಿ ಸಂಪನ್ನಗೊಂಡಿತು.
ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರವಾದ ಮೇರುಶ್ರೀ ಚಕ್ರವನ್ನು ಹೊಂದಿರುವ ಕ್ಷೇತ್ರದಲ್ಲಿ ಸಂಪನ್ನಗೊಂಡ ಈ ಮಹಾನಯಾಗವು ಬಹು ಫಲಪ್ರದವಾದದು.. ಸಹಸ್ರ ಸಹಸ್ರ ಸಂಖ್ಯೆಯ ಕದಳಿ ಹಣ್ಣನ್ನು ತ್ರಿಮದುರಯುಕ್ತವಾಗಿ ಹೋಮಿಸಿ ಲಲಿತಾ ಸಹಸ್ರನಾಮದಿಂದ ಆಕೆಯನ್ನು ವಿಧ ವಿಧದ ಕುಸುಮಗಳಿಂದ ಅರ್ಜಿಸಿ ಬಗೆ ಬಗೆಯ ನೈವೇದ್ಯವನ್ನಿಟ್ಟು ಭೂಮಂಡಲದ ಒಡತಿಯಾದ ರಾಜರಾಜೇಶ್ವರಿಯ ಅನುಗ್ರಹವನ್ನು ಯಾಚಿಸುವ ಯಾಗವನ್ನು ಮುಂಬೈಯ ಖ್ಯಾತ ಜಿಮ್ ಟ್ರೈನರ್ ವಿನೋದ್ ಜನ್ನ ಹಾಗೂ ಪ್ರಜ್ಞಾ ಪ್ರಜ್ಞ ಆಂಗ್ಲ ಮಾಧ್ಯಮ ಶಾಲೆಯ ಪರವಾಗಿ ಸಮರ್ಪಿಸಲಾಯಿತು.
ಬ್ರಾಹ್ಮಣ ಸುವಾಸಿನಿಯರ ಆರಾಧನೆ ಹನಿಕಾರಾದನೆ ನೆರವೇರಿತು.ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ಲಲಿತ ಅಂಬಿಕೆಯಾಗಿ ಗಿಳಿ ಹಸಿರು ಬಣ್ಣದ ಸೀರೆಯನ್ನುಟ್ಟು ಕಬ್ಬಿನ ಜಲ್ಲೆಯ ಮಧ್ಯದಲ್ಲಿ ಎದ್ದು ಬರುವಂತೆ ಲಲಿತಾಂಬಿಕೆಯಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.
ಕ್ಷೇತ್ರದ ವಿಶೇಷ ಸೇವೆಯಾದ ನೃತ್ಯ ಸೇವೆ ವಿವಿಧ ನೃತ್ಯ ತಂಡದ ನೃತ್ಯಾರ್ಥಿಗಳಿಂದ ಸಮರ್ಥಿಸಲ್ಪಟ್ಟಿತು
ಶ್ರೀ ಮಾತಾ ಭಜನಾ ಮಂಡಳಿ,ಡಾಕ್ಟರ್ ಅರವಿಂದ ಹೆಬ್ಬಾರ್ ಸಮನ್ವಿ ಅರ್ಚನಾ ಭಕ್ತಿ ಸಂಗೀತ ಕಾರ್ಯಕ್ರಮ ನೀಡಿದರು ಕಾಲಭೈರವ ನೃತ್ಯ ತಂಡ ಮತ್ತು ವಿದುಷಿ ಶ್ರಾವ್ಯ ಕುಮಾರಿ ಅವರಿಂದ ನೃತ್ಯ ವೈವಿಧ್ಯ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮೂಡಿ ಬಂತು.ಮಧ್ಯಾಹ್ನ ಹಾಗೂ ರಾತ್ರಿ ಸಾಸ್ತ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.
ದುರ್ಗಾ ನಮಸ್ಕಾರ ಪೂಜೆ ರಂಗ ಪೂಜೆ ಶ್ರೀ ದಿನೇಶ್ ರತ್ನ ಉದ್ಯಾವರ ದಂಪತಿಗಳು ಹಾಗೂ ಅಕ್ಷತಾ ರತಿಶ ಶೆಟ್ಟಿ