ಶಿವಮೊಗ್ಗ :ಡಿಸೆಂಬರ್ 21:ರಿಮೋಟ್ ಗಾಗಿ ಗಲಾಟೆ ನಡೆದು, ಈ ವೇಳೆ ಅಜ್ಜಿ ಮೊಮ್ಮಕ್ಕಳಿಗೆ ಬೈದಿದ್ದರಿಂದ ಯುವತಿ ಒಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸೂಳೆಬೈಲಿನಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಹನಾ (16) ಎಂದು ಗುರುತಿಸಲಾಗಿದೆ. ಟಿವಿ ರಿಮೋಟ್ಗಾಗಿ ಮಕ್ಕಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮೊಮ್ಮಗಳಿಗೆ ಅಜ್ಜಿ ಬೈದಿದ್ದಾರೆ. ಇದಕ್ಕಾಗಿ ಮನನೊಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.